logo

ಪ್ರಭಾ ನ್ಯೂಸ್ ಶಿರಾ

*ಈ ನಕಲಿ ಐ.ಎ.ಎಸ್ ಹಾಗೂ ಮುಖ್ಯಮಂತ್ರಿಗಳ ವಿಶೇಷ ಅಧೀನ ಕಾರ್ಯದರ್ಶಿಯಾದ ಅಮೃತಯ್ಯ ವಿ.ಕಾರಂಜಿಮಠ ರ ಬಗ್ಗೆ ಎಚ್ಚರ ಎಚ್ಚರ ಎಚ್ಚರ* :- ತಾನೊಬ್ಬ ಐ.ಎ.ಎಸ್. ಅಧಿಕಾರಿ, ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಅಧೀನ ಕಾರ್ಯದರ್ಶಿ ಎಂದು ಬೊಗಳೇ ಬಿಡುತ್ತಾ ಸಾಗಿರುವ ಈ ಅಸಾಮಿ ಸೂಟು ಬೂಟು ಟೋಪಿ ಜೊತೆಗೆ ಸರ್ಕಾರಿ ನಂಬರಿನ ಕಾರಿನ ಜೊತೆಗೆ ಸವಾರಿ ನಡೆಸುತ್ತಾ ಪ್ರತಿಯೊಬ್ಬರಿಗೂ ಪೋಜು ಕೊಡುತ್ತಾ ಗಾಂಭೀರ್ಯತನದಿಂದ ಮಂಕು ಬೂದಿ ಎರಚುತ್ತಾ ಸಾಗಿ ಕಡೆಗೆ ಪತ್ರಕರ್ತರಾದ ನಮ್ಮನ್ನು ಬಿಡದೇ ನಮನ್ನು ನಂಬಿಸಿ ನಮ್ಮ ಪತ್ರಕರ್ತರಿಗೆ ಕೋಟ್ಯಾಂತರ ರೂಗಳ ಪಂಗನಾಮ ಹಾಕಬೇಕೆನ್ನುವ ಇವನ ಸಂಚು ಫಲಿಸದೇ ನಮ್ಮ ಹಿರಿಯರಾದ ಜಗಳೂರು ಲಕ್ಷ್ಮಣರಾವ್ ರವರಲ್ಲಿ ಇವರ ಬಗ್ಗೆ ಮೂಡಿದ ಅನುಮಾನದಿಂದ ಎಚ್ಚೆತ್ತಾ ನಾನು ಸಾಮಾಜಿಕ ಜಾಲತಾಣ ಹಾಗೂ ನ್ಯಾಯಾಲಯಗಳ ವೆಬ್ಸೈಟ್ ನ ಸಹಾಯದಿಂದ ಇವನ ವಂಚನೆ ಜಾಲ ಪತ್ತೆ ಹಚ್ಚಿದ್ದೆ ಒಂದು ರೋಮಾಂಚನ ಇದರೊಂದಿಗೆ ಇವನ ಪೋಟೋನೂ ಲಗತ್ತಿಸಿರುತ್ತೇನೆ. ತನಿಖಾ ವರದಿಯ ಬೆನ್ನತ್ತಿ ಸಾಗಿದ ನನಗೆ ಇಂದು ವಿಧಾನಸೌಧದ ಪೋಲಿಸ್ ಠಾಣೆಯಲ್ಲಿ ASI ರವರಾದ ಶರಣ್ ಕುಮಾರ ರವರು ಒದಗಿಸಿದ ಮಾಹಿತಿ ನಿಜಕ್ಕೂ ಗಾಬರಿಯಾಯಿತು. ಇವನೊಬ್ಬ ಪ್ರಾಡ್, ಇವನು ಸರ್ಕಾರದ ಒಂದು ಅಟೆಂಡರ್ ಹಾಗೂ ಗುಮಾಸ್ತನ ನೌಕರಿಯೂ ಹೊಂದಿಲ್ಲ. ಆದರೆ ಹೇಳುವುದು ಮಾತ್ರ IAS ಅಧಿಕಾರಿಯೆಂದು. ಈತನ ಬಗ್ಗೆ ನಮ್ಮ ಪತ್ರಕರ್ತ ಮಿತ್ರರು ಹಾಗೂ ಸಾರ್ವಜನಿಕರು ಜಾಗೃತರಾಗಬೇಕೆಂದು ಮನವಿ. ಇವನ ಬಗ್ಗೆ ತನಿಖಾ ವರದಿಗೆ ನನ್ನ ತಂಡದ ಸದಸ್ಯರು ನವಿಲೂರು ಹಾಗೂ ಬೆಂಗಳೂರು ಸುತ್ತಾಮುತ್ತಾ ಜಾಲಾಡುತ್ತಾ ಇದ್ದಾರೆ. ಈಗಾಗಲೇ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ನೀಡಿರುವ ಇವನ ಪತ್ರಕ್ಕೆ ಸಂಬಂಧಪಟ್ಟಂತ ಒಂದು ಕೇಸನ್ನು ಹುಬ್ಬಳ್ಳಿ ಠಾಣೆಗೆ,ಮತ್ತೊಂದು ದೇವನಹಳ್ಳಿ ರೆಸಾರ್ಟ್ ನಲ್ಲಿ ತಾನೊಬ್ಬ ಮುಖ್ಯಮಂತ್ರಿ ಗಳ ಅಧೀನ ಕಾರ್ಯದರ್ಶಿ ಎಂದು ಪತ್ರಕರ್ತರ ಮುಂದೆ ಬಾಷಣ ಬಿಗಿದಿರುವ ಕುರಿತು ದೇವನಹಳ್ಳಿ ಪೋಲಿಸ್ ಠಾಣೆಗೆ ದೂರು ಹಾಗೂ ಒಂದು ಲಕ್ಷ ಹಣಕ್ಕೆ ಸಂಬಂಧಿಸಿದ ಚೆಕ್ ಬೌನ್ಸ್ ಕೇಸ್ ನ್ನು ಆದಷ್ಟು ಬೇಗ ಮಾಡಲಿದ್ದೇನೆ. ಈ ಪೋಟೋದಲ್ಲಿ ಕಾಣುವ ನಕಲಿ IAS ಬಗ್ಗೆ ಎಚ್ಚರವಿರಲಿ.

46
4867 views